ಸಂಕ್ರಮ ಮತ್ತು ಆಚ್ಛಾದನೆ
 
ನಮಗೆ ಗೋಚರಿಸುವಂತೆ ಕಿರಿ ವಿಸ್ತಾರದ ಆಕಾಶಕಾಯ ಹಿರಿಯದರ ಮೇಲೆ ಸರಿಯುತ್ತಿರುವ ದೃಶ್ಯ (ಟ್ರಾನ್ಸಿಟ್); ನಮಗೆ ಭಾಸವಾಗುವಂತೆ ಹಿರಿ ವಿಸ್ತಾರದ ಆಕಾಶಕಾಯ ಕಿರಿಯದನ್ನು ತುಸುಕಾಲ  ಮರೆಮಾಡುವ  ಘಟನೆ  (ಅಕ್ಕಲ್ಟೇಶನ್).  

ಚಿತ್ರ-1

ಉದಾಹರಣೆ:  ಸೂರ್ಯಬಿಂಬದ  ಅಡ್ಡ ಶುಕ್ರಸಂಕ್ರವi ; ಚಂದ್ರಬಿಂಬದ ಗ್ರಹ ಅಥವಾ ನಕ್ಷತ್ರದ ಆಚ್ಛಾದನೆ. ಸೂರ್ಯ ಕುರಿತಂತೆ ಚಂದ್ರ ಸಂಕ್ರಮಕ್ಕೆ ಸೂರ್ಯಗ್ರಹಣ ಎಂದು ಹೆಸರು. 
	ಸಂಕ್ರಮ ಮಾಪಕ: ಯಾವುದೇ ಆಕಾಶಕಾಯ ನಿರ್ದಿಷ್ಟ ರೇಖಾಂಶವೃತ್ತವನ್ನು ಅಡ್ಡಹಾಯುವ ಘಟನೆಯನ್ನು ವೀಕ್ಷಿಸಲು ಬಳಸುವ ಸಾಧನ (ಟ್ರಾಸ್ಸಿಟ್ ಇನ್‍ಸ್ಟ್ರುಮೆಂಟ್).	
								*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ